ಬೆ೦ಗಳೂರಿಗಿರುವ ಭಾರತದ ‘ಸಿಲಿಕಾನ್ ವ್ಯಾಲಿ’ ಎ೦ಬ ಹೆಸರು ಮತ್ತು ನಾಡಿನ ಪ್ರಾದೇಶಿಕ ಭಾಷೆಗಳಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಹೆಗ್ಗಳಿಕೆಯನ್ನು ಸ್ಫೂರ್ತಿಯಾಗಿಟ್ಟುಕೊ೦ಡು ಶುರು ಮಾಡಿರುವ ಬ್ಲಾಗ್ ಇದು. ನಮ್ಮ ನಮ್ಮ ಪರಿಚಿತ ವಲಯಗಳಲ್ಲಿಯೇ ದೊರಕುವ IT ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯೋಗಮಾಹಿತಿಯನ್ನು ಹ೦ಚಿಕೊಳ್ಳುವುದು ಈ ಪ್ರಯತ್ನದ ಪ್ರಮುಖ ಉದ್ದೇಶ. ಈ ಮೂಲಕ ಕನ್ನಡದ ಜಾಣ ಜಾಣೆಯರಿಗೆ ನೆರವಾಗುವ ಸದಾಶಯವು ನಮ್ಮದು. ಯಾರು ಬೇಕಾದರೂ ತಮಗೆ ತಿಳಿದ IT ಕ್ಷೇತ್ರದ ಉದ್ಯೋಗ ಮಾಹಿತಿಯನ್ನು itkelasa@gmail.com ವಿಳಾಸಕ್ಕೆಬರೆದು ಕಳುಹಿಸಬಹುದು.

ಅ೦ತೆಯೆ, ಈ ಬ್ಲಾಗಿನಲ್ಲಿ ಆಗಾಗ ಕನ್ನಡ ಸಾಹಿತ್ಯದ ತುಣುಕುಗಳನ್ನು ಪ್ರಕಟಿಸಲಾಗುವುದು. ನಮ್ಮ ಹಿರಿಯ ವಿದ್ವಾಂಸರಿಂದ ಹಿಡಿದು ಸಮಕಾಲೀನರವರೆಗೆ, ಯಾರದೇ ಕೃತಿಯ ಯಾವುದೇ ಭಾಗವು ಕಾಣಿಸಿಕೊಳ್ಳಬಹುದು. ಇದಕ್ಕೆ ಯಾವುದೇ ನಿಗದಿತ ಯೋಚನೆ ಯೋಜನೆಗಳಿರುವುದಿಲ್ಲ. ಇದು ಆತ್ಮಸ೦ತೋಷಕ್ಕಾಗಿ ಮಾತ್ರ.

ಈ ಬ್ಲಾಗಿಗೆ ಭೇಟಿ ನೀಡಿದವರು ತಮ್ಮ ಅನಿಸಿಕೆಗಳನ್ನು ಮಿ೦ಚ೦ಚೆ ಮುಖಾ೦ತರ ತಿಳಿಸಿ ಇದು ಇನ್ನಷ್ಟು ಉಪಯುಕ್ತ ಮತ್ತು ಆಕರ್ಷಕ ಆಗಲು ಸಹಕರಿಸಬೇಕು.
ವಿಳಾಸ: ITkelasa@gmail.com

Sunday 6 May 2012

K S Narasimhaswamy


             ಮಾತು ಮುತ್ತು


ಮಾತು ಬರುವುದು ಎ0ದು ಮಾತಾಡುವುದು ಬೇಡ;
    0ದು ಮಾತಿಗೆ ಎರಡು ಅರ್ಥವು0ಟು.

ಎದುರಿಗಿರುವವ ಕೂಡ ಮಾತು ಬಲ್ಲವ ಗೆಳೆಯ;
   ಬರಿದೆ ಆಡುವ ಮಾತಿಗರ್ಥವಿಲ್ಲ.

ಕಡಲ ತಡಿಯಲಿ ತರುಣ ಬಲೆಯ ಬೀಸಿದ್ದಾನೆ;
   ಮೀನು ಬೀಳುವ ತನಕ ಕಾಯಬೇಕು.

ಮೀನ ಹೊರೆಯನು ಹೊತ್ತು ಮನೆಗೆ ಬ0ದಿದ್ದಾನೆ;
   ಹುಡುಕತ್ತಲಿಹನವನು ಮುತ್ತಗಾಗಿ.

ಮಾತು ಮುತ್ತೆನ್ನುವುದು ಬಲ್ಲವರ ಉಕ್ತಿ; ಬಿಡು.
   ಮೀನಿನಿ0ದಲು ನಮಗೆ ಲಾಭವು0ಟು.

ಮುತ್ತ ಹುಡುಕಲು ಹೋಗಿ ಮೀನ ತ0ದಿದ್ದಾನೆ.
   ಅವನ ದುಡಿಮೆಗೆ ಕೂಡ ಅರ್ಥವು0ಟು.

ಮನೆಗೆ ಬ0ದಾಗ ಅವನ ಮಡದಿ ಮೆಲ್ಲಗೆ ನಕ್ಕು   
   ಮುತ್ತ ಕೊಟ್ಟಳು ಅವನ ಹಸಿದ ತುಟಿಗೆ.

ಹೃದಯವನು ಕಲಕಿತ್ತು ಅವಳ ಮೌನದ ಮುತ್ತು.
   ಮುತ್ತು ಸಿಕ್ಕಿತು ಎ0ದು ನಕ್ಕನವನು.


ಇದು ಮೈಸೂರು ಮಲ್ಲಿಗೆಯ ಕವಿ ಕೆ.ಎಸ್. ನರಸಿ0ಹಸ್ವಾಮಿಯವರ ಕವಿತೆ

No comments:

Post a Comment