ಬೆ೦ಗಳೂರಿಗಿರುವ ಭಾರತದ ‘ಸಿಲಿಕಾನ್ ವ್ಯಾಲಿ’ ಎ೦ಬ ಹೆಸರು ಮತ್ತು ನಾಡಿನ ಪ್ರಾದೇಶಿಕ ಭಾಷೆಗಳಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಹೆಗ್ಗಳಿಕೆಯನ್ನು ಸ್ಫೂರ್ತಿಯಾಗಿಟ್ಟುಕೊ೦ಡು ಶುರು ಮಾಡಿರುವ ಬ್ಲಾಗ್ ಇದು. ನಮ್ಮ ನಮ್ಮ ಪರಿಚಿತ ವಲಯಗಳಲ್ಲಿಯೇ ದೊರಕುವ IT ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯೋಗಮಾಹಿತಿಯನ್ನು ಹ೦ಚಿಕೊಳ್ಳುವುದು ಈ ಪ್ರಯತ್ನದ ಪ್ರಮುಖ ಉದ್ದೇಶ. ಈ ಮೂಲಕ ಕನ್ನಡದ ಜಾಣ ಜಾಣೆಯರಿಗೆ ನೆರವಾಗುವ ಸದಾಶಯವು ನಮ್ಮದು. ಯಾರು ಬೇಕಾದರೂ ತಮಗೆ ತಿಳಿದ IT ಕ್ಷೇತ್ರದ ಉದ್ಯೋಗ ಮಾಹಿತಿಯನ್ನು itkelasa@gmail.com ವಿಳಾಸಕ್ಕೆಬರೆದು ಕಳುಹಿಸಬಹುದು.

ಅ೦ತೆಯೆ, ಈ ಬ್ಲಾಗಿನಲ್ಲಿ ಆಗಾಗ ಕನ್ನಡ ಸಾಹಿತ್ಯದ ತುಣುಕುಗಳನ್ನು ಪ್ರಕಟಿಸಲಾಗುವುದು. ನಮ್ಮ ಹಿರಿಯ ವಿದ್ವಾಂಸರಿಂದ ಹಿಡಿದು ಸಮಕಾಲೀನರವರೆಗೆ, ಯಾರದೇ ಕೃತಿಯ ಯಾವುದೇ ಭಾಗವು ಕಾಣಿಸಿಕೊಳ್ಳಬಹುದು. ಇದಕ್ಕೆ ಯಾವುದೇ ನಿಗದಿತ ಯೋಚನೆ ಯೋಜನೆಗಳಿರುವುದಿಲ್ಲ. ಇದು ಆತ್ಮಸ೦ತೋಷಕ್ಕಾಗಿ ಮಾತ್ರ.

ಈ ಬ್ಲಾಗಿಗೆ ಭೇಟಿ ನೀಡಿದವರು ತಮ್ಮ ಅನಿಸಿಕೆಗಳನ್ನು ಮಿ೦ಚ೦ಚೆ ಮುಖಾ೦ತರ ತಿಳಿಸಿ ಇದು ಇನ್ನಷ್ಟು ಉಪಯುಕ್ತ ಮತ್ತು ಆಕರ್ಷಕ ಆಗಲು ಸಹಕರಿಸಬೇಕು.
ವಿಳಾಸ: ITkelasa@gmail.com

Tuesday 9 October 2012

ಆತ್ಮೀಯರೇ,

ಈ ಬ್ಲಾಗು ಮತ್ತು ಇದರ ಉದ್ದೇಶ ಹಲವರಿಗೆ ತಲಪಿರುವದು ಆರಂಭದಲ್ಲಿ ಬಂದ ಶುಭ ಹಾರೈಕೆಗಳ ಮಿಂಚಂಚೆಗಳಿಂದ ಸಾಬೀತಾಗಿದೆ. ಕೆಲ ಸಹೃದಯರು ತಮ್ಮ ತಮ್ಮ ಕಛೇರಿಗಳಲ್ಲಿದ್ದ ಉದ್ಯೋಗ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಕೂಡ. ಮಾಹಿತಿ ವಿನಿಮಯ ಹಾಗೂ ಸಾಹಿತ್ಯದ ತುಣುಕುಗಳ ಪ್ರಕಟಣೆ ಉಮೇದಿನಿಂದಲೇ 
ನಡೆಯಿತು. 

ಕ್ರಮೇಣ ಇದ್ದ ಉಮೇದು ಕಡಿಮೆಯಾಗಿ ಈಗ ಇಲ್ಲವೇ ಇಲ್ಲವೆನ್ನುವಷ್ಟಾಗಿದೆ. ಐಟಿ ಕ್ಷೇತ್ರದಲ್ಲಿ ಪರಭಾಷಿಗರ ಪ್ರಾಬಲ್ಯ ಹೆಚ್ಚಾಗುತ್ತಿದೆ.  ಕನ್ನಡಿಗರ ಕಡೆಗಣನೆ ಮುಂದುವರೆದಿದೆ. ಹೀಗಿದ್ದು ಶುರುವಿನಲ್ಲಾದ ವಿನಿಮಯ ಕಡಿಮೆಯಾಗಿದ್ದಕ್ಕೆ ಸಕಾರಣ ಗೊತ್ತಿಲ್ಲ. ಮತ್ತೆ ಕನ್ನಡಿಗರ ಅಭಿಮಾನದತ್ತ ಬೊಟ್ಟು ಮಾಡುವುದು ಎಷ್ಟರ ಮಟ್ಟಿಗೆ ಸರಿಯೋ? ಈತನಕ ಈ ಬ್ಲಾಗಿನಿಂದ ಒಬ್ಬನೇ ಒಬ್ಬ ಕನ್ನಡಿಗನಿಗಾದರೂ ನೆರವಾಗಿದ್ದರೆ ಅಷ್ಟೇ ಸಾಕು.

ಈ ಬ್ಲಾಗಿಗೆ ಸಹಕರಿಸಿ ಪ್ರೋತ್ಸಾಹಿಸಿದ ಹಿತೈಷಿಗಳಿಗೆ ವಂದನೆಗಳು.

ಇನ್ನು ಮುಂದೆ ಈ ಬ್ಲಾಗು ಚಲಾವಣೆಯಲ್ಲಿ ಇರುವುದಿಲ್ಲ ಎಂದು ಹೇಳಲು ಮನಸ್ಸು ಭಾರವಾಗುತ್ತಿದೆ. ಆದರೆ ಬೇರೆ ದಾರಿಯಿಲ್ಲ.

ಈ ಬ್ಲಾಗು ಯಾರು ಯಾವಾಗ ತೆರೆದು ನೋಡಿದರೂ ಈ ಹಂತದಲ್ಲಿಯೇ ಇರುತ್ತದೆ. ಇದರಿಂದ ಮತ್ತಾರಿಗಾದರೂ ಅಭಿಮಾನ ಜಾಗೃತವಾಗಬಹುದೆಂಬ ನಿರೀಕ್ಷೆಯೊಂದಿಗೆ....

1 comment:

  1. ನಿಮ್ಮ ಉದ್ದೇಶ ಚೆನ್ನಾಗಿತ್ತು. ಆದರೆ ಈ ಬ್ಲಾಗ್ ಗೆ ಹೆಚ್ಚಿನ ಪ್ರಚಾರ ಮತ್ತು reader base ಇಲ್ಲದೇ ಇದ್ದುದರಿಂದ ಹೀಗಾಗಿದೆ. ಬೇಸರ ಬೇಡ. ಸಾಧ್ಯವಾದ ಕಡೆ ಸಾಧ್ಯವಾದ ರೀತಿಯಲ್ಲಿ ಇದು ಮುಂದುವರೆಯಲಿ..

    ReplyDelete