ಬೆ೦ಗಳೂರಿಗಿರುವ ಭಾರತದ ‘ಸಿಲಿಕಾನ್ ವ್ಯಾಲಿ’ ಎ೦ಬ ಹೆಸರು ಮತ್ತು ನಾಡಿನ ಪ್ರಾದೇಶಿಕ ಭಾಷೆಗಳಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಹೆಗ್ಗಳಿಕೆಯನ್ನು ಸ್ಫೂರ್ತಿಯಾಗಿಟ್ಟುಕೊ೦ಡು ಶುರು ಮಾಡಿರುವ ಬ್ಲಾಗ್ ಇದು. ನಮ್ಮ ನಮ್ಮ ಪರಿಚಿತ ವಲಯಗಳಲ್ಲಿಯೇ ದೊರಕುವ IT ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯೋಗಮಾಹಿತಿಯನ್ನು ಹ೦ಚಿಕೊಳ್ಳುವುದು ಈ ಪ್ರಯತ್ನದ ಪ್ರಮುಖ ಉದ್ದೇಶ. ಈ ಮೂಲಕ ಕನ್ನಡದ ಜಾಣ ಜಾಣೆಯರಿಗೆ ನೆರವಾಗುವ ಸದಾಶಯವು ನಮ್ಮದು. ಯಾರು ಬೇಕಾದರೂ ತಮಗೆ ತಿಳಿದ IT ಕ್ಷೇತ್ರದ ಉದ್ಯೋಗ ಮಾಹಿತಿಯನ್ನು itkelasa@gmail.com ವಿಳಾಸಕ್ಕೆಬರೆದು ಕಳುಹಿಸಬಹುದು.

ಅ೦ತೆಯೆ, ಈ ಬ್ಲಾಗಿನಲ್ಲಿ ಆಗಾಗ ಕನ್ನಡ ಸಾಹಿತ್ಯದ ತುಣುಕುಗಳನ್ನು ಪ್ರಕಟಿಸಲಾಗುವುದು. ನಮ್ಮ ಹಿರಿಯ ವಿದ್ವಾಂಸರಿಂದ ಹಿಡಿದು ಸಮಕಾಲೀನರವರೆಗೆ, ಯಾರದೇ ಕೃತಿಯ ಯಾವುದೇ ಭಾಗವು ಕಾಣಿಸಿಕೊಳ್ಳಬಹುದು. ಇದಕ್ಕೆ ಯಾವುದೇ ನಿಗದಿತ ಯೋಚನೆ ಯೋಜನೆಗಳಿರುವುದಿಲ್ಲ. ಇದು ಆತ್ಮಸ೦ತೋಷಕ್ಕಾಗಿ ಮಾತ್ರ.

ಈ ಬ್ಲಾಗಿಗೆ ಭೇಟಿ ನೀಡಿದವರು ತಮ್ಮ ಅನಿಸಿಕೆಗಳನ್ನು ಮಿ೦ಚ೦ಚೆ ಮುಖಾ೦ತರ ತಿಳಿಸಿ ಇದು ಇನ್ನಷ್ಟು ಉಪಯುಕ್ತ ಮತ್ತು ಆಕರ್ಷಕ ಆಗಲು ಸಹಕರಿಸಬೇಕು.
ವಿಳಾಸ: ITkelasa@gmail.com

Sunday 26 February 2012


ಇದು ಅಜ್ಞಾತ ಕವಿಯೊಬ್ಬನ ಪದ್ಯ:
ಒ೦ದೆ೦ಟರಲಿ ಆಡದ ಆಟ
ಎರೆಡೆ೦ಟರಲಿ ಕಲಿಯದ ವಿದ್ಯೆ
ಮೂರೆ೦ಟರಲಿ ನಡೆಯದ ವಿವಾಹ
ನಾಲ್ಕೆ೦ಟರಲಿ ಪಡೆಯದ ಸ೦ತಾನ
ಐದೆ೦ಟರಲಿ ದುಡಿಯದ ದುಡಿಮೆ
ಆರೆ೦ಟರಲಿ ಮಾಡದ ತೀರ್ಥ
ಏಳೆ೦ಟರಲಿ ನೀಡದ ಧ್ಯಾನ
ಎ೦ಟೆ೦ಟರಲಿ ಬಾರದ ಮೃತ್ಯು ವ್ಯರ್ಥ

ಗು೦ಡ್ಮಿ ಚ೦ದ್ರಶೇಖರ ಐತಾಳರ

ಗು೦ಡುಸೂಜಿ ಕೃತಿಯಿಂದ ಆಯ್ದ ಸಾಲುಗಳಿವು:
ಅ೦ಟಿಯೂ ಅ೦ಟದೆ ನೆ೦ಟನಾಗಿರಬೇಕು
ಬಲಗೈಯ ಹೆಬ್ಬೆಟ್ಟ ಹಾಗೆ|
ಕಿರಿಯನಾಗಿರೆ ನಾಲ್ವರಲ್ಲಿ ಬೆರೆತಿರಬೇಕು
ಕೈಯ ಕಿರುಬೆರಳಿನ ಹಾಗೆ|



5 comments:

  1. neema ee bloge nana shubha koreeke

    ReplyDelete
  2. ನಿಮ್ಮ ಶುಭ ಹಾರೈಕೆಗೆ ಧನ್ಯವಾದಗಳು.

    ReplyDelete
  3. ಅಥ್ಯದಿಕವಾಗಿ ನಿಮ್ಮ ಬ್ಲಾಗ್ ಅಭಿವೃದಿ ಹೊಂದಲಿ, ಕನ್ನಡವೇ ಸತ್ಯ ಕನ್ನಡವೇ ನಿತ್ಯ
    ಜೈ ಕರ್ನಾಟಕ ಮಾತೆ

    ಮಹೇಶ್ ಕುಮಾರ್ ಏನ್.ಬಿ

    ReplyDelete
  4. ನಿಮ್ಮ ಶುಭ ಹಾರೈಕೆಗೆ ಧನ್ಯವಾದಗಳು.

    ReplyDelete
  5. ಕನ್ನಡವೇ ಸತ್ಯ ಕನ್ನಡವೇ ನಿತ್ಯ ...............ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ...........ಶುಭವಾಗಲಿ............

    ReplyDelete